ನಮ್ ಹೀರೋ ಆದಿತ್ಯ ಒಬ್ಬ ಸಾಹಸಿ ಜರ್ನಲಿಸ್ಟ್, ಪ್ರಕೃತಿಯ ಗರ್ಭದಲ್ಲಿರುವ ರಹಸ್ಯಗಳ ಹುಡುಕಾಟ ಅಂದ್ರೆ ಸಿಕ್ಕಾಪಟ್ಟೆ ಆಸಕ್ತಿ. ಅದ್ಭುತ ರಹಸ್ಯಗಳಿಗೇ ಅಂತಾನೇ ಹೆಸರಾಗಿರುವ ಮಧುಮಲೈ ದೇವಸ್ಥಾನಕ್ಕೆ ಹೋಗ್ತಾನೆ. ದಟ್ಟವಾದ ಅರೋಲಾ ಕಾಡಿನ ಮಧ್ಯೆ ಇರುವ ಮಧುಮಲೈ ದೇವಸ್ಥಾನಕ್ಕೆ ಬರುವ ಆದಿತ್ಯನಿಗೆ ಇಲ್ಲಿ ಮತ್ತಷ್ಟು ಸಂಗತಿಗಳು ತಿಳಿಯುತ್ತೆ. ಈ ಮಧ್ಯೆ ದೇವಸ್ಥಾನದ ಪವಿತ್ರ ಸಂಪತ್ತನ್ನು ಲೂಟಿ ಮಾಡೋಕೆ ಅಂತಾನೆ ಹೊಂಚು ಹಾಕ್ತಿದ್ದ ಶಕ್ತಿಶಾಲಿ ಖದೀಮರ ತಂಡದ ಬಗ್ಗೆ ಆದಿತ್ಯನಿಗೆ ತಿಳಿದು, ಆ ದೇವಸ್ಥಾನದ ರಕ್ಷಣೆಗೆ ಮುಂದಾಗ್ತಾನೆ. ಆದಿತ್ಯನ ಕ್ಷಣಕ್ಷಣಕ್ಕೂ ಮೈ ಜುಮ್ಮೆನಿಸುವ ಸಾಹಸಮಯ ಜರ್ನಿಯ ಆಡಿಯೋ ಸ್ಟೋರಿ "ರಂಗಿತರಂಗ" ಕೇಳಿ KUKUFMನಲ್ಲಿ
