ಶಿವ ಮತ್ತು ಜಗ್ಗು ಸ್ನೇಹಿತರು. ನಿಧಿಯ ಹುಡುಕಾಟವೊಂದ್ರಲ್ಲಿ ಜೊತೆಯಾಗೋ ಶಿವ ಮತ್ತು ಜಗ್ಗುಗೆ ದಾರಿಯುದ್ದಕ್ಕೂ ವಿಲಕ್ಷಣ ಅನುಭವಗಳು ಹಾಗೂ ಭಯಾನಕ ಅಪಾಯಗಳು ಎದುರಾಗ್ತವೆ. ನಿಗೂಢ ಬಂಗಲೆಯೊಂದಕ್ಕೆ ಬಂದು ಸೇರೋ ಇಬ್ಬರಿಗೂ ನಿಧಿಯ ಬಗ್ಗೆ ತಿಳಿದಿರುವ ಹುಡುಗಿಯೊಬ್ಬಳ ಪರಿಚಯವಾಗುತ್ತೆ. ಹುಡುಗಿಯ ಮೋಹದ ಬಲೆಗೆ ಸಿಲುಕೋ ಸ್ನೇಹಿತರಿಗೆ ಸಾವಿನ ಕರಿನೆರಳು ದುಷ್ಟಶಕ್ತಿಗಳ ರೂಪದಲ್ಲಿ ತಮ್ಮನ್ನ ಹಿಂಬಾಲಿಸ್ತಿರೋದು ಗೊತ್ತಾಗೋದೇ ಇಲ್ಲ. ಸ್ನೇಹ ಸಲುಗೆಗಳಿಂದ ಶಿವ ಮತ್ತು ಜಗ್ಗುವಿಗೆ ಹತ್ತಿರವಾಗೋ ಆ ಹುಡುಗಿಯ ಮನಸಲ್ಲೇನಿದೆ? ಆಕೆಯ ಉದ್ದೇಶಗಳಲ್ಲಿ ಅಡಗಿರೋ ಹುನ್ನಾರಗಳೇನು? ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ, ರೋಚಕ ತಿರುವುಗಳನ್ನ ಹೊಂದಿರೋ ಭಯಾನಕ ಹಾರರ್ ಸ್ಟೋರಿ "ಆತ್ಮಬಂಧನ" ಕೇಳಿ KUKU FMನಲ್ಲಿ.



