ಲೇಖಕ ಪ್ರಕಾಶರಾಜ್ ಮೇಹು ಅವರ ಕೃತಿ-ಅಂತರಂಗದ ಅಣ್ಣ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಅವರು ‘ನಟ ರಾಜಕುಮಾರ ಅವರ ಬಗ್ಗೆ ಬಂದಿರುವ ಪುಸ್ತಕಗಳಿಗೆ ಹೋಲಿಸಿದರೆ ಈ ಪುಸ್ತಕ ತುಂಬಾ ಚಿಕ್ಕದು. ಆದರೂ, ಅದು ಪರಿಶೀಲನೆಗೆ ಒಡ್ಡಿರುವ ವಿಷಯಗಳ ವ್ಯಾಪ್ತಿ ದೊಡ್ಡದು. ರಾಜ್ ಅವರ ವ್ಯಕ್ತಿತ್ವವನ್ನು ಉತ್ಪ್ರೇಕ್ಷೆಯ ಮಾತುಗಳಿಲ್ಲದೇ ಈ ಕೃತಿ ಕಟ್ಟಿಕೊಡುತ್ತದೆ. ಬರವಣಿಗೆಯಲ್ಲಿ ಸಮಚಿತ್ತದ ನಿರೂಪಣೆ ಇದೆ. ಸತ್ಯಾಂಶವನ್ನು ಮುಂದಿಟ್ಟುಕೊಂಡು ನಿರುದ್ವಿಗ್ನವಾಗಿ ತರ್ಕಿಸುವ ಗುಣ ಈ ಕೃತಿಯಲ್ಲಿದೆ’ ಎಂದು ಪ್ರಶಂಸಿಸಿದ್ದರೆ, ಡಾ. ಕೆ. ಪುಟ್ಟಸ್ವಾಮಿ ಅವರು ‘ಕೆಲವು ಅಪರೂಪದ ಮಾಹಿತಿ ಒದಗಿಸಿ, ರಾಜ್-ಲೀಲಾ ವಿನೋದವಲ್ಲ’ ಎಂಬ ಆಧ್ಯಾಯ ಸೇರಿಸಿ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇಳಿ ಅಂತರಂಗದ ಅಣ್ಣ ನಿಮ್ಮ ಕುಕು FM ಅಲ್ಲಿ ಮಾತ್ರ.


