ಪವರ್ಫುಲ್ ಬಿಲಿಯನೇರ್ ಅವಿನಾಶ್ ಜಿಂದಾಲ್ನ ಒಬ್ಬಳೇ ಮಗಳು ನಂದಿನಿ ಮೈ ಮೇಲೆ ದುಷ್ಟ ಆತ್ಮವೊಂದು ಆವರಿಸಿಕೊಂಡಿದೆ. ಆದ್ರೆ, ನಂದಿನಿಗೆ ಮದುವೆ ಮಾಡಿಸಿದ್ರೆ, ಆಕೆಯ ದೇಹದಲ್ಲಿರೋ ದುಷ್ಟ ಆತ್ಮ ಆಕೆಯ ಗಂಡನಿಗೆ ವರ್ಗಾವಣೆಯಾಗಿ ನಂದಿನಿ ಬದುಕ್ತಾಳೆ ಅಂತ ಮಂತ್ರವಾದಿಯೊಬ್ಬ ಸಲಹೆ ನೀಡ್ತಾನೆ. ಇರೋ ಒಬ್ಬಳೇ ವಾರಸುದಾರೆ ಮಗಳನ್ನ ಶತಾಯಗತಾಯ ಉಳಿಸ್ಕೋಬೇಕು ಅಂತ ಅವಿನಾಶ್ ಜಿಂದಾಲ್ ನಂದಿನಿ ಮದುವೆಗೆ ಹುಡುಗನನ್ನ ಹುಡುಕೋಕೆ ಆರಂಭಿಸ್ತಾನೆ. ದುಷ್ಟ ಆತ್ಮ ಸೇರ್ಕೊಂಡಿರೋ ನಂದಿನಿನಾ ಮದುವೆ ಆಗೋಕೆ ಮುಂದಾಗೋ ನತದೃಷ್ಟ ಯುವಕ ಯಾರು? ಆತ ನತದೃಷ್ಟನಾ ಅಥವಾ ಸೂಪರ್ ಹೀರೋನಾ? ಕ್ಷಣ-ಕ್ಷಣಕ್ಕೂ ಮೈನವಿರೇಳಿಸೋ ಕ್ಲಾಸಿಕ್ ಥ್ರಿಲ್ಲರ್ ಆಡಿಯೋ ಸೀರೀಸ್ "ನಂ.೧ ಅಳಿಯ" ಕೇಳಿ ನಿಮ್ಮ KUKU FMನಲ್ಲಿ.

