ನ್ಯಾಯವಾದ ದಾರಿಯಲ್ಲಿ ಕಷ್ಟ ಪಟ್ಟು ದುಡಿದು ತನ್ನ ಮಗಳು ಮೀರಾಳನ್ನ ಬೆಳೆಸ್ತಿರೋ ಆರ್ಯ ಒಬ್ಬ ಸಿಂಗಲ್ ಫಾದರ್. ಬಡತನದಲ್ಲೇ ಇದ್ರೂ ಮಗಳನ್ನ ಮಾತ್ರ ರಾಣಿ ಹಾಗೆ ನೋಡ್ಕೋಳ್ತಾ ಇರೋ ಆರ್ಯನಿಗೆ ಮಗಳೇ ಸರ್ವಸ್ವ. ಪ್ರತಿಷ್ಟಿತ ಅಂತರಾಷ್ಟ್ರೀಯ ಶಾಲೆಯೊಂದ್ರಲ್ಲಿ ಮಗಳನ್ನ ಓದಿಸ್ತಿರೋ ಆರ್ಯ, ಸ್ಕೂಲ್ ಫೀಸ್ಗಾಗಿ ಬೇರೆ ಬೇರೆ ಕೆಲಸಗಳನ್ನ ಮಾಡ್ತಾನೆ. ಹೀಗೆ ಸುಂದರವಾಗಿ ನಡೀತಿರೋ ಅಪ್ಪ-ಮಗಳ ಜೀವನದಲ್ಲಿ ಜಗನ್ನಾಥ್ ರೆಡ್ಡಿ ಅನ್ನೋ ಅಪಾಯಕಾರಿ ಕ್ರಿಮಿನಲ್ ಕಂಟಕವಾಗಿ ಬರ್ತಾನೆ! ಮಗಳ ಜೀವಕ್ಕೆ ಅಪಾಯವಿದೆ ಅನ್ನೋ ಮುನ್ಸೂಚನೆ ಸಿಗ್ತಿದ್ದಂತೆ ಆರ್ಯ ಇಷ್ಟು ದಿನ ಮುಚ್ಚಿಟ್ಟಿದ್ದ ತನ್ನ ನಿಜಸ್ವರೂಪಕ್ಕೆ ಮರಳುತ್ತಾನೆ! ಆರ್ಯನ ಪವರ್ಫುಲ್ ಪಾಸ್ಟ್ ಹೇಗಿತ್ತು? ಆತನಿಗಿರೋ ರಹಸ್ಯವಾದ ಶಕ್ತಿ ಯಾವುದು? ಕ್ಷಣ-ಕ್ಷಣಕ್ಕೂ ಮೈನವೀರೇಳಿಸುವ ಥ್ರಿಲ್ಲರ್ ಫ್ಯಾಮಿಲಿ ಡ್ರಾಮಾ ಆಡಿಯೋ ಸೀರೀಸ್ "ನನ್ನಪ್ಪ Superstar" ಕೇಳಿ ನಿಮ್ಮ KUKU FMನಲ್ಲಿ.


