ಜೀವನದಲ್ಲಿ ಮೊದಲ ಪ್ರೀತಿಗೆ ಯಾವತ್ತಿಗೂ ವಿಶೇಷವಾದ ಸ್ಥಾನ ಇದ್ದೇ ಇರುತ್ತೆ. ಆದ್ರೆ ಹದಿಹರೆಯದಲ್ಲಿ ಹುಟ್ಟೋ ಪ್ರೇಮ ಸಫಲವಾಗೋದು ತೀರಾ ಕಡಿಮೆ. ಇದೇ ರೀತಿ ಬೇರೆಯಾದ ಜೋಡಿ ಮತ್ತೆ ಸಂಧಿಸಿದ್ರೆ? ಹಳೆ ಗೆಳೆಯನ ಪುನರಾಗಮನದಿಂದ ಮನಸ್ಸಿನಲ್ಲಿ ಏಳುವ ಆಲೋಚನೆಗಳೇನು? ಇದ್ರಿಂದ ಹುಡುಗಿಯ ಸಂಸಾರನೌಕೆ ಸೋಲುತ್ತೋ? ವಿಫಲ ಪ್ರೀತಿ ಗೆಲ್ಲುತ್ತೋ? ಹೀಗೆ ನೆನಪಿನ ದೋಣಿಯಲ್ಲಿ ಸಾಗುತ್ತಾ, ಸಿಕ್ಕ ಒಂದೊಂದೇ ಮುತ್ತುಗಳನ್ನ ಪೋಣಿಸಿ ಹಾರ ಎಣೆದಿದ್ದಾರೆ ಲೇಖಕರಾದ 'ವಾಸುದೇವ ಮೂರ್ತಿ'. ಈ 'ಮುತ್ತಿನ ಹಾರ' ಆಡಿಯೋಬುಕ್ ನಿಮಗಾಗಿ. ಕೇಳಿ ಪ್ರೇಮಲೋಕದಲ್ಲೊಮ್ಮೆ ವಿಹರಿಸಿ!





