‘ಎನ್ ಕೌಂಟರ್’ ಕುಂ.ವೀರಭದ್ರಪ್ಪ ಅವರು ಬರೆದಿರುವ ನೈಜ ಘಟನೆಯಾಧಾರಿತ ಕಾದಂಬರಿ. ಈ ಕತೆಯ ಮೂಲ ಹುಟ್ಟಿದ್ದು ಐಪಿಎಸ್ ಅಧಿಕಾರಿ ಶಂಕರ ಬಿದರಿಯವರು ಹೇಳಿದ ನೈಜ ಘಟನೆಯೊಂದರಿಂದ ಎನ್ನುತ್ತಾರೆ ಕಾದಂಬರಿಕಾರ ಕುಂವೀ. ಶಂಕರ ಬಿದರಿಯವರು ಬಳ್ಳಾರಿಯಲ್ಲಿ ಭೀಮ್ಲಾ ನಾಯಕ್ ಹೆಸರಿನ ಕುಖ್ಯಾತನನ್ನು ಎನ್ ಕೌಂಟರ್ ಮಾಡಿದ್ದು 1990, ಸೆಪ್ಟೆಂಬರ್ ಮಾಹೆಯಲ್ಲಿ. ಆ ಎನ್ ಕೌಂಟರ್ ನ ನೆನಪುಗಳನ್ನು ಲೇಖಕ ಕುಂ.ವೀರಭದ್ರಪ್ಪನವರಲ್ಲಿ ಹಂಚಿಕೊಂಡ ಬಿದರಿ ಅವರು ‘ಈ ಕುರಿತು ಬರೆಯಿರಿ ’ ಎಂದು ತಿಳಿಸಿದ ಕಾರಣದಿಂದ ಈ ಕಾದಂಬರಿಯನ್ನು ಬರೆದದ್ದಾಗಿಯೂ ಲೇಖಕರು ತಿಳಿಸಿದ್ದಾರೆ.




