ಈ ಜಗತ್ತೇ ಸೋಜಿಗದ ಭಂಡಾರ! ಇಲ್ಲಿ ಹುಡುಕಿದಷ್ಟು ನಿಗೂಢಗಳ ಅನಾವರಣವಾಗುತ್ತೆ. ಅಂಥ ರೋಚಕ ಕಥಾಸಂಕಲನವೇ ನಾಗೇಶ್ ಕುಮಾರ್ ಸಿ. ಎಸ್ ಬರೆದಿರುವ 'ರಹಸ್ಯಾಯನ'. ಇದ್ರಲ್ಲಿ ಅನ್ಯಗ್ರಹ ಜೀವಿಗಳ ರಹಸ್ಯ ಕಾರ್ಯಾಚರಣೆ, ಲೆಮೂರಿಯಾ ಅನ್ನೋ ಮುಳುಗಿದ ಖಂಡದಲ್ಲಿದ್ದ ನಿಧಿಯ ರೋಚಕತೆ, ರಾಮಾಯಣದಲ್ಲಿ ಆಂಜನೀಯನಿಗೆ ಕಾಣಿಸಿ ಮರೆಯಾದ ಪರ್ವತ ಸೇರಿದಂತೆ ಒಟ್ಟು 6 ಕುತೂಹಲಕಾರಿ ಕಥೆಗಳಿವೆ. ಈ ಆಡಿಯೋಬುಕ್ ನಿಮಗಾಗಿ!




