ಮನುಷ್ಯನ ಭಾವನಾತ್ಮಕ ಪ್ರಪಂಚಕ್ಕೆ ಹತ್ತಿರವಾಗೋ ಸಾಹಿತ್ಯ ಪ್ರಕಾರವೆಂದರೆ ಕವನಗಳು. ಭಾವನೆಗಳಿಗೆ ಬಣ್ಣ ಕಟ್ಟಿ, ಪ್ರಾಸಗಳನ್ನ ಹೊಂದಿಸಿ, ಸಾಹಿತ್ಯಿಕವಾಗಿ ವಿವರಿಸುವ ಕಲೆಯೇ ಕವನ ಲೇಖನ. ಬ್ಯಾಂಕ್ ಉದ್ಯೋಗಿಯಾಗಿರುವ ತುಮಕೂರಿನ ಮಂಜುನಾಥ್ರವರು ಅಂತಹ ಕವನಗಳನ್ನು ಮನಮುಟ್ಟುವಂತೆ ಬರೆಯುವುದರಲ್ಲಿ ನಿಸ್ಸೀಮರು! ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿನ ಭಾವನೆಗಳಿಗೆ ನೀಡಿರುವ ಮೌಲ್ಯಗಳನ್ನು ಈ ಕವನಗಳಲ್ಲಿ ಕಾಣಬಹುದಾಗಿದೆ. ಜೊತೆಗೆ ಕವಿಯ ಮನಸ್ಸಿಗೆ ಹತ್ತಿರವಾಗೋ ಪ್ರಕೃತಿ, ಪಾಣಿ-ಪಕ್ಷಿಗಳ ಕುರಿತು ಬರೆದಿರುವ ಕವನಗಳು ಕೇಳುಗರ ಮನಸ್ಸಿಗೆ ಹತ್ತಿರವಾಗುತ್ತವೆ. ಜೀವನದಲ್ಲಿ ಕಾಣಬಹುದಾದ ಪ್ರತಿಯೊಂದು ಮಜಲುಗಳ ಕುರಿತು ರಚಿಸಿರುವ ಸುಂದರ ಕವನ ಸಂಕಲನ ʼಮೊದಲ ಮಳೆʼ ಕೇಳಿ KUKU FMನಲ್ಲಿ.









