ಕಡಲ ಕಿನಾರೆಯ ‘ಟೈಮ್ಸ್ ಆಫ್ ಮಂಗಳೂರು’ ಪತ್ರಿಕೆಯಲ್ಲಿ ಕೆಲಸ ಮಾಡೋ ಜರ್ನಲಿಸ್ಟ್ ಅಪ್ರಮೇಯ. ಅವನ ಜೀವನದಲ್ಲಿ ನಡೆದ ದುರ್ಘಟನೆಗಳಿಂದ, “ಧೈರ್ಯವಂತನಾಗಿದ್ರೆ ಜಗಳಗಳು ಜಾಸ್ತಿ. ನಾನು ಹೇಡಿಯಾಗೇ ಬದುಕ್ತೀನಿ” ಅಂತಾ ಶಪಥ ಮಾಡಿದ್ದ. ಸೈಲೆಂಟಾಗಿ ತಾನಾಯ್ತು ತನ್ನ ಕಾಲಂ ಆಯ್ತು ಅಂತಾ ಆಂಜನೇಯನನ್ನ ಜಪಿಸುತ್ತಾ ಒಂದು ವಿಶೇಷವಾದ ಪಾತ್ರವನ್ನ ಸೃಷ್ಟಿ ಮಾಡಿದ್ದ. ಆ ಆರ್ಟಿಕಲ್ ಮೂಲಕ ನಿಜ ಜೀವನದಲ್ಲಿ ತಾನು ಏನು ಮಾಡೋದಕ್ಕೆ ಸಾಧ್ಯವಾಗ್ತಿಲ್ವೋ, ಅದನ್ನ ಮಾಡೋದಕ್ಕೆ ಹೊರಟಿದ್ದ. ಫಿಕ್ಷನ್ ಕ್ಯಾರೆಕ್ಟರ್ ಮೂಲಕ ಸಾಮಾಜಿಕ ಸಮಸ್ಯೆಗಳ ವಿರುದ್ಧ ದನಿ ಎತ್ತಿದ್ದ! ಆದ್ರೆ ಅಪ್ರಮೇಯ ಬರೀತಿದ್ದ ಕಥೆ ನಿಜಕ್ಕೂ ಘಟಿಸುತ್ತಾ ಹೋಯ್ತು! ಅಷ್ಟಕ್ಕೂ ಅಪ್ರಮೇಯನ ಹಿಂದಿದ್ದ ಆ ಅಗೋಚರ ಶಕ್ತಿ ಯಾವುದು.? ಅವನಿಗೆ ಕೇಳಿಸುತ್ತಿದ್ದ ಆ ‘ವೀರ’ನ ದನಿ ಯಾರದ್ದು.? ಸಮುದ್ರದಲ್ಲಿ ಸಿಕ್ಕ ಕಡಗದ ಹಿಂದಿರೋ ರಹಸ್ಯವೇನು.? ಕೇಳಿ ಸಖತ್ ಫ್ಯಾಂಟಸಿ ಸೀರೀಸ್ ‘ವೀರಾಧಿವೀರ’.




