ಕನ್ನಡದ ಪ್ರಖ್ಯಾತ ಲೇಖಕರಾದ ಎಸ್. ಎಲ್ ಭೈರಪ್ಪನವರ ಜನಪ್ರಿಯ ಕಾದಂಬರಿಗಳಲ್ಲಿ 'ನಾಯಿ-ನೆರಳು' ಕೂಡ ಒಂದು. ಕಥೆಯ ಪಾತ್ರಧಾರಿ ತಿರುಮಲ ಜೋಯಿಸರಿಗೆ ವಯಸ್ಸಾದ ಮೇಲೆ ಮಗ ಹುಟ್ಟುತ್ತಾನೆ. ಈ ಹುಡುಗ ಬೆಳೆದು ದೊಡ್ಡವನಾಗುತ್ತಿದ್ದಂತೆ ತನಗೆ ಮದುವೆಯಾಗಿದೆ ಅಂತಾ ಹೇಳುತ್ತಾನೆ . ಅಲ್ಲದೇ ಯಾರೊಂದಿಗೂ ಬೆರೆಯದೇ, ಒಂದು ನಾಯಿಯ ಜೊತೆಗೆ ಕಾಲ ಕಳೆಯೋದಕ್ಕೆ ಶುರು ಮಾಡುತ್ತಾನೆ. ಹೀಗೆ ಪುನರ್ಜನ್ಮದ ಎಳೆಯನ್ನು ಮನರಂಜನಾತ್ಮಕವಾಗಿ ವಿವರಿಸಿದ್ದಾರೆ ಲೇಖಕರು. ಈ ಕಾದಂಬರಿಯ ಆಡಿಯೋಬುಕ್ ನಿಮಗಾಗಿ!





