ಜೀವನ ಎಷ್ಟು ಸರಳವೋ, ಕೆಲವೊಮ್ಮೆ ಅಷ್ಟೇ ಸಂಕೀರ್ಣವೂ ಹೌದು. ಹೀಗಾಗಿ ಯಾವುದೇ ತರ್ಕವಿಲ್ಲದೆ ಬದುಕನ್ನು ಕೇವಲ ಬದುಕನ್ನಾಗಿ ನೋಡಿರುವ ಕೃತಿ ಪ್ರಖ್ಯಾತ ಲೇಖಕ ಎಸ್. ಎಲ್. ಭೈರಪ್ಪ ಅವರು ಬರೆದಿರುವ 'ಗೃಹಭಂಗ' ಕಾದಂಬರಿ. ಇದೊಂದು ಮನೆತನಕ್ಕೆ ಸಂಬಂಧಿಸಿದ ನಂಜಮ್ಮ ಅನ್ನೋ ಹೆಣ್ಣುಮಗಳ ಕಥೆಯಾದ್ರೂ, ಇದು ಎಲ್ಲಿ ಬೇಕಾದ್ರೂ, ಯಾರ ಮನೆಯಲ್ಲಿ ಬೇಕಾದ್ರೂ ನಡೆಯಬಹುದಾದ ಘಟನೆಯಾಧಾರಿತ ಕಾದಂಬರಿಯಾಗಿದೆ. ನಂಜಮ್ಮ ಎಲ್ಲವನ್ನೂ ಕಳೆದುಕೊಂಡು ತನ್ನ ಬದುಕಿಗಾಗಿ, ತನ್ನ ಮಕ್ಕಳಿಗಾಗಿ ನಡೆಸುವ ಸುದೀರ್ಘ ಹೋರಾಟವೇ ಈ ಕಾದಂಬರಿಯ ತಿರುಳು. ಭಾರತದ ಎಲ್ಲಾ ಭಾಷೆಗಳಿಗೂ ಅನುವಾದಗೊಂಡು, ಓದುಗರ ಮೆಚ್ಚುಗೆಗೆ ಪಾತ್ರವಾಗಿರುವ ಈ 'ಗೃಹಭಂಗ' ಕಾದಂಬರಿಯ ಆಡಿಯೋಬುಕ್ ಇಲ್ಲಿದೆ. ಕೇಳಿ.!




