ನಾವು ಪ್ರತಿದಿನ ಭೇಟಿಯಾಗೋ ಪ್ರತಿಯೊಬ್ಬರಲ್ಲೂ ಒಂದೊಂದು ಕಥೆಯಿರುತ್ತೆ. ಅದನ್ನು ಕೇಳೊ ಆಸಕ್ತಿ ನಮಗಿರಬೇಕಷ್ಟೇ. ಆಗ ನಮ್ಮ ಬದುಕಿನ ಮಹತ್ತರ ವಿಚಾರಗಳು ನಮ್ಮ ಮುಂದೆ ಅನಾವರಣಗೊಳ್ತವೆ. ಇಂಥವ್ರಲ್ಲಿ ಆಟೋ ಡ್ರೈವರ್ಸ್ ಕೂಡ ಒಬ್ಬರು.! ನೀವು ಸುಮ್ಮನೆ ಆಟೋ ಚಾಲಕರನ್ನ ಮಾತಾಡಿಸಿ ನೋಡಿ, ಒಬ್ಬೊಬ್ಬರು ಕೂಡ ಯಾವ ಹೀರೋಗೂ ಕಡಿಮೆಯಿಲ್ಲದಂಥ ಜವಾಬ್ದಾರಿ ಹೊತ್ತಿರ್ತಾರೆ. ನಿಜಕ್ಕೂ ಅವರ ಬದುಕು ಎಲ್ಲರಿಗೂ ಮಾದರಿಯಾಗಿರುತ್ತೆ. ಅಂಥ ಆಟೋ ಡ್ರೈವರ್ಸ್ ಜೊತೆಗಿನ ಹರಟೆಯೇ ಲೇಖಕಿ 'ಭಾರತಿ ಬಿ. ವಿ' ಅವ್ರು ಬರೆದಿರೋ 'ಜಸ್ಟ್ ಮಾತ್ ಮಾತಲ್ಲಿ' ಪುಸ್ತಕ. ಈ ಆಡಿಯೋಬುಕ್ ನಿಮಗಾಗಿ.!




