ಕನ್ನಡದ ಪ್ರಸಿದ್ಧ ಲೇಖಕಿ 'ತ್ರಿವೇಣಿ'ಯವರು ಬರೆದ ಕಾದಂಬರಿ 'ಹಣ್ಣೆಲೆ ಚಿಗುರಿದಾಗ'. ಈ ಕೃತಿಯ ಮೊದಲ ಭಾಗದಲ್ಲಿ ನಿವೃತ್ತ ವಕೀಲರಾದ ರಾಯರ ಬದುಕನ್ನ ವಿವರಿಸಿದ್ರೆ, ಎರಡನೇ ಭಾಗದಲ್ಲಿ ವಿಧವಾ ವಿವಾಹವನ್ನು ತಿಳಿಸಲಾಗಿದೆ. ವಿಧವೆಯರಲ್ಲೂ ಎಲ್ಲರಂತೆ ಪ್ರೇಮದ ಹಂಬಲವಿರುತ್ತೆ, ತಾವೂ ಮರುಮದುವೆಯಾಗಿ ಬಾಳಬೇಕೆಂಬ ತುಡಿತವಿರುತ್ತೆ. ಈ ಸಂಗತಿಯನ್ನ ವಾದದ ದೃಷ್ಟಿಕೋನದಲ್ಲಿ ನೋಡುವ ಬದಲು, ಮಾನವೀಯ ಅವಕಾಶದ ನೆಲಗಟ್ಟಿನಲ್ಲಿ ನೋಡ್ಬೇಕು. ಹೇಗೆ ಒಬ್ಬ ವಿಧವೆ, ಮತ್ತೋರ್ವ ವಿಧುರನನ್ನ ವಿವಾಹವಾಗಿ ರಾಯರು ಮತ್ತು ಸಮಾಜದ ಕಣ್ಣು ತೆರಿಸುತ್ತಾಳೆ ಅನ್ನೋ ಸಮಾಜಮುಖಿ ಕಥೆ ಇದು.




