ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ನಡೆದ ವಚನ ಚಳವಳಿಯನ್ನು ಕೇಂದ್ರವಾಗಿಟ್ಟು ರಚನೆಯಾದ ನಾಟಕ. ವಚನ ಚಳುವಳಿಯ ನೇತಾರ ಬಸವಣ್ಣ. ಬಸವಣ್ಣ ಮಾಡಿದ ಪವಾಡ ಜೋಳ ಮುತ್ತಾದದ್ದಲ್ಲ. ದುಡಿಯುವ ಜನರನ್ನು ಒಳಗೊಂಡ ಕಾಯಕ ಜೀವಿಗಳನ್ನು ಒಟ್ಟುಗೂಡಿಸಿದ್ದೇ ಪವಾಡ. ಆಳುವ ದೊರೆ ಬಿಜ್ಜಳ ಕೂಡ ಅದನ್ನು ಒಪ್ಪಿಕೊಂಡಿದ್ದಾನೆ. ನಾಟಕ ಕಾಂತಿಯ ಸ್ವರೂಪ ಹಾಗೂ ಅದರ ಸೋಲು-ಗೆಲುವುಗಳಿಗೆ ಕಾರಣವಾದ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳ ಶೋಧವಾಗಿರುವುದರಿಂದ ಅದು ಸಾರ್ವತ್ರಿಕ ಪ್ರಸ್ತುತತೆಯನ್ನು ಚಿತ್ರಿಸುತ್ತದೆ.



