ಕನ್ನಡದ ನವ್ಯ ಸಾಹಿತ್ಯ ಪರಂಪರೆಯಲ್ಲಿ ‘ಡಾ. ಶಾಂತಿನಾಥ ದೇಸಾಯಿ’ ಅವರ ಹೆಸರು ಪ್ರಸಿದ್ಧವಾದುದು. ಇವರು ಕಥೆ, ಕಾದಂಬರಿ, ಪ್ರಬಂಧಗಳು, ವಿಮರ್ಶೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನ ರಚಿಸಿದ್ದಾರೆ. ಇವುಗಳಲ್ಲಿ ‘ಪರಿವರ್ತನೆ’ ಕಥೆ ಕೂಡ ಒಂದು. ತನ್ನ ಮಗಳು ಪ್ರೀತಿಸಿದ ವ್ಯಕ್ತಿ ಜೊತೆ ಮನೆ ಬಿಟ್ಟು ಹೋದಾಗ, ತಂದೆ ಅನುಭವಿಸುವ ತೊಳಲಾಟವೇ ಈ ಕಥೆಯ ಎಳೆ. ಈ ಆಡಿಯೋಬುಕ್ ನಿಮಗಾಗಿ.







