ಅಭಿವ್ಯಕ್ತಿಯಲ್ಲಿ ಸಾಧ್ಯವಾಗದ ಸಂಕೀರ್ಣತೆಯನ್ನು ಭಾಷೆಗೆ ತುರುಕುವ ಪ್ರಯತ್ನ ಹೆಚ್ಚಿನ ಗದ್ಯ ಲೇಖಕರದು. ವೈದೇಹಿ ಸರಳವಾಗಿ ಬರೆದೂ ಸಂಕೀರ್ಣವಾದ ಭಾಷೆ ಸಾಧಿಸುತ್ತಾರೆ. ಮಾಸ್ತಿಯವರ ಸಣ್ಣ ಕಥೆ ಕಾರಂತರ ಕಾದಂಬರಿಗಳ ಹಿರಿಮೆಗೆ ಕಾರಣವಾಗಿದ್ದ ಈ ಗುಣವನ್ನು ಪ್ರಜ್ಞಾಪೂರ್ವಕವಾಗಿ ಮೈಗೂಡಿಸಿಕೊಂಡ ಸಣ್ಣ ಕಥೆಗಾರರಲ್ಲಿ ವೈದೇಹಿ ಒಬ್ಬರು. ದಿನನಿತ್ಯದ ಸ್ತ್ರೀಯರ ಜೀವನದ ನೋಟಗಳನ್ನು ಸುಂದರವಾಗಿ ಒದಗಿಸುವ ಒಂದು ಸಣ್ಣ ಕಥಾ ಸಂಕಲನ.


